Wednesday, April 1, 2009

ಹೊಸ ಭಾಷೆ

ತುಂಬ ಕಲಿತೆ ನಾನು ಈ ಊರಿಗೆ ಬಂದು academics.... obviously ಅದಕ್ಕೆ ತಾನೆ ಬಂದಿದ್ದು ಅದು ಬಿಟ್ಟು ಮುಖ್ಯವಾಗಿ ಇನ್ನೊಂದು ವಿಷಯಕ್ಕೆ I'm gratefull to ಚಿಂತಾಮಣಿ.... ಒಂದು ಹೊಸ ಅನುಭವಾನ ತೆಗೆದು ಕೊಡ್ತು ಅದು ನಾನು ಎದುರಿಸಿದ ಪರಿಸ್ಥಿತಿಗಳ ಮೂಲಕ ಮಾತ್ರವಲ್ಲ....
ಒಂದು ಹೊಸ ಭಾಷೆಯ ಮೂಲಕ....
ಒಂದು ಹೊಸ ಭಾಷೆ, ಹೊಸ ಸಾಹಿತ್ಯಕ್ಕೆ, ಹೊಸ ಸಿನಿಮಾಕ್ಕೆ ತನ್ಮೂಲಕ ಹೊಸ ಅನುಭವಕ್ಕೆ ಬಾಗಿಲಾಗುತ್ತದೆ.....
ದೇವರಿಗೆ ಒಬ್ಬ ಹೆಂಡತಿಯನ್ನು ಪ್ರೀತಿಯಿಂದ ನೋಡಿ ಇನ್ನೊಬ್ಬಳ ಮನಸು ನೋಯಿಸಬೇಡ ಎನ್ನುವ ಭಕ್ತ [ಅನ್ನಮಾಚಾರ್ಯ], ಸಂಬಂಧಗಳಿಗೆ ಬೆಲೆ ಕೊಡದೆ ತನ್ನ ಹುಚ್ಚು ಆದರ್ಶಕ್ಕೆ ಬಲಿಯಾಗುವ ವಿಚಾರವಾದಿ [ಚಲಂ], ಯಾರೋ ಒಬ್ಬನ ಸಿನೆಮಾಗೆ ನೂರಾರು ಕುರಿಗಳನ್ನು ಬಳಿ ಕೊಡುವ ಜನ, ಸ್ವಾತಿಮುತ್ಯಂ, ಶಂಕರಾಭರಣಂನಂತಹ classics, ಬ್ರಹ್ಮಾನಂದಂ, ಜನ್ದ್ಯಾಲರ ಹಾಸ್ಯ, ಬಾಪು ಗೊಂಬೆಗಳು (ಚಿತ್ರಗಳು ಅನ್ನಬಹುದು) , ರಾಜಕೀಯದ ಶೌರ್ಯ!!! ತುಂಬಿದ ಮನೋರಂಜನೆ!!! almost ನಮ್ಮ ಕರ್ನಾಟಕದ ತರಹದ್ದೇ ಭೋಜನ ಶೈಲಿ, ಪ್ರಾಂತ್ಯಗಳನ್ನು ಹೊಂದಿರುವ ಪಕ್ಕದ ರಾಜ್ಯ (ಅದ್ಯಾಕೋ ನನಗೆ ಮೊದಲ ಬಾರಿಗೆ ಇದು ಹೊಸದಾಗಿ ಕಾಣ್ತು!!!!) ...........
ಈ ಎಲ್ಲ ರೀತಿಯ ಅನುಭವಗಳನ್ನು ಬಹುಶಃ ನಾನು ತೆಲುಗು ಕಲ್ತಿರ್ಲಿಲ್ಲ ಅಂದ್ರೆ ಪಡಿತಿರ್ಲಿಲ್ವೇನೋ...
ಇನ್ನು ಚಿಂತಾಮಣಿಯ ವಿಷಯಕ್ಕೆ ಬಂದರೆ ತೆಲುಗು ಕಲಿಯಲೇ ಬೇಕಾಗಿತ್ತು (ಕ್ಷಮಿಸಿ ಅನಿವಾರ್ಯತೆ ಏನಿಲ್ಲ), ಏಕೆಂದರೆ ಅಲ್ಲಿನ nativiti ಗೆ ಹೊಂದಿಕೊಳ್ಳಲು ,ಅಲ್ಲಿಯ ದೈನಂದಿನ ಜೀವನವನ್ನು ಅನುಭವಿಸಲು, ತೆಲುಗಿನ ಜ್ಞಾನವಿದ್ದರೆ ಮಾತ್ರ ಸಂಪೂರ್ಣ ಸಾಧ್ಯ...
ಈ ಒಂದೇ ಒಂದು ಉದ್ಧೇಶದಿಂದ ಕಲಿತ ಆ ಭಾಷೆಯ ಪ್ರಭಾವ ನನ್ನ ಮೇಲೆ ಎಷ್ಟರ ಮಟ್ಟಿಗೆ ಆಗಿದೆಯೆಂದರೆ.....
నేనిప్పుడు తెలుగు రాయగలను...

No comments:

Post a Comment