Friday, February 6, 2009

ಕಾಡತಾವ ನೆನಪು

ಬಹಳ ದಿವಸಗಳು ಆಗಿ ಹೋಯ್ತು ನಾನು ಆ ರೀತಿ ಇದ್ದು.......... ಬೆಳಗಿನ ಜಾವ ಕಾಕಡಾರತಿಗೆ ಎದ್ದು ಧಾವಂತದಲ್ಲಿ ತಯಾರಾಗಿ ಹೋಗಿ ಪ್ರಾರ್ಥನೆ ಮುಗಿಸಿ ಹೊರಗೆ ಬರುವಷ್ಟರಲ್ಲಿ ಮನಸ್ಸು ಪ್ರಫುಲ್ಲ..... ಆದ್ರೆ ಒಳಗಿದ್ದಂಥ ನಿದ್ದೆ ಅನ್ನೋ ರಾಕ್ಷಸ ಪ್ರತಿ ದಿವಸ ಆ ಒಂದು ಅನುಭವನ ಕಿತ್ಕೊಂಡು ಬಿಡ್ತಿದ್ದ.....
ನಂತರ ಸ್ನಾನ, ತಿಂಡಿ, ಕಾಲೇಜ್, ಸಿನಿಮಾ, ಕ್ರಿಕೆಟ್ ...... ಸ್ನೇಹಿತರು(ಯಾವಾಗಲು ಜೊತೆ ಇರ್ತಿದ್ರು)....... जाने कहा गए वो दिन....... ಸ್ವಲ್ಪ ಭಯ, ಸ್ವಲ್ಪ ಧೈರ್ಯ, ಸ್ವಲ್ಪ ಬೇಜವಾಬ್ದಾರಿ, ಎಲ್ಲ ಸೇರಿ ಪರೀಕ್ಷೆ ಟೈಂಗೆ ಒಂದು ಯುದ್ಧ ಎದಿರಿಸೋ ಸಂಭ್ರಮ!! ಎಲ್ಲಿ ಹೋಯ್ತು ಇದೆಲ್ಲ!!! ನನ್ನ ಮಟ್ಟಿಗೆ ಹೇಳ್ಬೇಕು ಅಂದ್ರೆ ಈ ಎಲ್ಲ ಅನುಭವಗಳ ನೆಲೆ ಚಿಂತಾಮಣಿ.... ರಾಮ ಮಂದಿರ, ಪಾಲಿಟೆಕ್ನಿಕ್....
ಒಂದು ವಿಷ್ಯ ಮರ್ತಿದ್ದೆ ಕ್ಷಮ್ಸಿ ಅಲ್ಲಿಯ ತಿನಿಸುಗಳು... ಸಾಯಂಕಾಲ ಆದ್ರೆ ಆಝಾದ ಚೋವ್ಕ್ ಅಥವ p c aar ಕಾಂಪ್ಲೆಕ್ಸ್ (ದುಡ್ಡಿದ್ರೆ)....
ಎಲ್ಲಿ ಹೋಯ್ತು ಅದೆಲ್ಲ ಈಗ ಎಲ್ಲ ಇದೆ ಆದ್ರೆ ಟೈಮ್ ಇಲ್ಲ ಜೊತೇಲಿ ಸ್ನೇಹಿತರಿಲ್ಲ...... ಆ ದಿನಗಳು ಮತ್ತೆ ಬರತ್ತೋ ಇಲ್ವೋ ಗೊತ್ತಿಲ್ಲ .......
ನೆನಪಾದಾಗ್ಲೆಲ್ಲಾ ಹನಿ ಮಳೆಯಲ್ಲಿ ನಡೆದಷ್ಟು ಸಮಾಧಾನ ......
ಇನ್ನು ಒಂದು ವಿಷ್ಯ ನಮ್ಮಲ್ಲಿ ಆ ದಿನಗಳಲ್ಲಿ ಇದ್ಧಂಥ ಒಂದು ಅಮಾಯಕತೆ ಮಾಯವಾಗಿದೆ ಎಲ್ಲದನ್ನು ನಂಬ್ತಿದ್ವಿ, ಅನುಭವಿಸುತಿದ್ವಿ, ಯಾಕೋ ತುಂಬ MEAN MINDED ಆಗಿದ್ದೀವಿ ಅನ್ಸತ್ತೆ.....
ಒಂದ್ವಿಷಯ........
मेहरबान होके फिर से बुलालेना मुझको
में कोई गुज़रा वक्त तो नही
जो फिर न आ सकू.....
ಇನ್ನು ಒಂದ್ಸಲ ಆ ಕಲ ಬರಲಿ ಅಂಥ ಹಾರೈಸುತ್ತ............

1 comment:

  1. Wow. What a beautifull brief description of the life at Chintamani.Your style of writing is too good.It brought back my old memories as well.But my present will be a pleasant memory in the future because I live in Chintamani.

    ReplyDelete