ಲೋಕ ಸುಮ್ಕೆ ಕೆಟ್ ಓಗೈತೆ ಪೂರ ತುಂಬಾ ಬಾಳ....
ಭೂತ್ಗೋಳಿತ್ತ ಕುಣಿದ್ರೆ ಆದೊರ್ ಕೈಗೋಳ್ ಹಾಕೋ ತಾಳ.....
ದುಡ್ದಿದ್ ಕಚ್ಚು ಹೊಟ್ಟೆ ಕಿಚ್ಚು ಏನಿಂಗ್ ಎಚ್ಕೊನ್ದೈತೆ....
ಸುಕ ಸಾಂತಿ ತೃಪ್ತಿ ಅಂತು ಬಾಗಿಲ್ ಮುಚ್ಕೊಂಡ್ ಐತೆ ...
ಹೈಕುನ್ದ್ಅಪ್ನಂಗ್ ಇದ್ ನಮ್ ದೇಸ ಈಗ್ ಎಂಗ್ ಐತೆ ನೋಡು .........
ಕಟುಕರ್ ಕೋಣೆಲ್ ನರಕದ್ ಕಪ್ಪ ಬದುಕಿರೋರ್ ಸುಡುಗಾಡು ಸುಡುಗಾಡು....
ದೇವ್ರು ಗಿವ್ರು ಅಂದ್ಕೊಂಡಿದ್ರೆ ನಮ್ಗೆ ಉದ್ಧಾರಿಲ್ಲ ...
ದೇವ್ರಿಗ್ ದೇವ್ರೇ ನಮ್ಗೆ ನಾವೇ ಬೆಳ್ದೊರ್ ಪಾಲಿಗ್ ಬೆಲ್ಲ .....
ಬದ್ಕ್ ಬೇಕಂದ್ರೆ ಈ ಲೋಕ್ದಿಂದ ಬಚಾವ್ ಆಗ್ಬೇಕ್ ತುರ್ತು
ನಮ್ದೆ ಲೋಕ ಹುಟ್ಟಿಸ್ಕೊಬೇಕು ಈ ಲೋಕಾನೇ ಮರ್ತು...
ಇನ್ನೊಬ್ಇಂದ್ರ ತರಿಸ್ತಿನಿ ಅಂದ ಇಸ್ವಾಮಿತ್ರ....
ನಂದೇ ಲೋಕ ಕಟ್ಕೊಂತಿನಿ ಅನ್ನೋದ್ ಮಂತ್ರ ...
-ಜಿ. ಪಿ. ರಾಜರತ್ನಂ

ದೇವರಿಗೆ ದೇವ್ರೇ ನಮಗೆ ನಾವೇ ! ಎಷ್ಟರ ಮಟ್ಟಿಗೆ ಸಮಂಜಸ??
ReplyDeleteಅಥವಾ ನಾವೇ ಬುದ್ದಿಜೀವಿಗಳು ಅಂತ ವಾದ ಮಾಡಿದ್ರು ದಿನದ ಕೊನೇಲಿ ದೇವರ ಶರಣಾಗ್ತಿವಿ ಆಲ್ವಾ??
Ee tharahada vaadagalanna meeridantha Moorthirayaru, Bhagath singh namma madhye iddu hodavaru alwa!!!
ReplyDelete